Wednesday, August 7, 2013





'ಮಾತಾಡು ಮಾರಾಯ ಮೌನಮುನಿ' ಎಂದು ಛೇಡಿಸಿದ್ದೆ...
'ಫೋಟೋದಲ್ಲಾದರೂ ಚೂರು ನಗು ಇರಲಿ' ಅಂತ ಕಾಲೆಳೆದಿದ್ದೆ...

ಕೇಳೀಗ ನೀ ಸಾಕೆನ್ನುವಷ್ಟು ಹಲುಬಲು ಕಲಿತಿದ್ದೇನೆ...
ನೋಡು, ಮುಖದಲ್ಲಿ ನಗು ಮಾಸದಂತೆ ಅಚ್ಚೊಡೆದಿದೆ...

ಆದರೀಗ ನೀನಿಲ್ಲವಲ್ಲ.. 

ಮಾತು ಮಡಕೆಯೊಡೆವಷ್ಟಿದ್ದರೂ ಒಳಗೆಲ್ಲ ಮೌನವೇ ರಾಜ್ಯವಾಳುತ್ತಿದೆ.. 
ಈ ನೀರಸ ನಗುವು ಅರ್ಥವೇ ಇಲ್ಲದೆ ಕಂಗಾಲಾಗಿದೆ...

Sunday, August 4, 2013

ಹೀಗೊಂದು ಹೋಲಿಕೆ!



ಮಧ್ಯಾಹ್ನ ಮಲಗೆಬೇಕೆಂದುಕೊಂಡಾಗಲೆಲ್ಲ ಕೇಳಿ ಬರುವ ಕಮ್ಮಾರನ ಹತಾರದ ಕರ್ಕಶದಿಂದ ನೆನಪಾಗುವುದೊಂದೇ.. 

ಕಷ್ಟ ಪಟ್ಟು ಮರೆಯಬೇಕೆಂದುಕೊಂಡಾಗಲೆಲ್ಲ ತೂರಿ ಬರುವ ನಿನ್ನ ಮಿಂಚಿನ ಸಂದೇಶಗಳು!



Saturday, August 3, 2013

ಗೋಜಲು



ಇವತ್ತು ಹುಣ್ಣಿಮೆಯೋ ಅಲ್ಲವೋ ಗೊತ್ತಿಲ್ಲ.. ಹೊರಗೆ ಮೋಡ ಕವಿದಿದೆ..


ಮನೆ ಬಾಗಿಲು ತೆರೆದರೆ ತಂಗಾಳಿ.. ಬಹುಷಃ ಮಳೆ ಬಂದು ನಿಂತ ಪರಿಣಾಮವಿರಬೇಕು..


ಎನೋ ಬರೆಯಬೇಕೆನ್ನುವ ಹಂಬಲ.. ತಲೆಗೇನೂ ಹೊಳೆಯುತ್ತಿಲ್ಲ..


ಮನಸ್ಸಿನಲ್ಲೂ ಎನೋ ಗೊಂದಲ.. ನೀ ಬಳಿಯಲ್ಲಿಲ್ಲವಲ್ಲ?!