- ಗೊಬ್ಬರ, ಹೆಂಡ ಜಾಸ್ತಿ ಕೊಳೆತ ಹಂಗೆ ರೇಟ್ ಜಾಸ್ತಿ.. ಅದೇ ತರ ನಮ್ಮ ಯೋಚನೆ ಜಾಸ್ತಿ ಹೊಲಸಾದಂಗೂ ಡಿಮ್ಯಾಂಡ್ ಜಾಸ್ತಿ!
- ಎರಡು ಒಳ್ಳೇ ಹಲ್ಲುಗಳ ಮಧ್ಯ ಒಂದು ಹುಳುಕು ಹಲ್ಲಿದ್ರೆ ಉಳ್ದವೆರಡು ಹಾಳಾಗ್ದೇ ಇರಲಿ ಅಂತ ಜಾಸ್ತಿನೇ ಕಾಳಜಿ ತೋರಸ್ತೀವಿ.. ಅದೇ ಆ ಹಲ್ಲನ್ನ ಕಿತ್ತಾದ್ಮೇಲೆ? ಹಂಗೇ ನಮ್ಮಂತವ್ರು ನಿಮ್ಮ ಮಧ್ಯೆ ಇರೋದಕ್ಕೇ ನಿಮ್ಗೆ ಮೆರಗು ಜಾಸ್ತಿ!
- ನಮ್ಮ ಕಲೀಗೊಬ್ರು ನಾನ್ ಯಾವಾಗ್ಲೂ ಕಿವಿಗೆ ಪ್ಲಗಿನ್ ಮಾಡ್ಕೊಂಡು ಹಾಡು ಕೇಳೋದ್ ನೋಡಿ 'ಅಷ್ಟೆಲ್ಲ ಅಡಿಕ್ಷನ್ ಒಳ್ಳೇದಲ್ರೀ' ಅಂದವ್ರು 'ಇರಿ, ಒಂದು ಸಿಗ್ರೇಟ್ ಸೇದ್ ಬರ್ತೀನಿ' ಅಂದ್ರು!!
- ಅದೇನೋ ಗೊತ್ತಿಲ್ರಿ, ಹುಡ್ಗೀರ್ ಜೊತೆ ಜಗಳ ಆಡೋವಾಗ ಸೋತು ಫೋನಿಟ್ಮೇಲೇ ಒಳ್ಳೊಳ್ಳೆ ಡೈಲಾಗುಗಳು ನೆನ್ಪಾಗ್ತಾವೆ, ಥತ್ ಇಸ್ಕಿ!
- ನೆನ್ನೆ ನಿನ್ನ ನೋಡ್ದಾಗ ನೀನು ನಾಚ್ಕೊಂಡಿದ್ದೆ; ಇವತ್ತು ನಿನ್ನ ನೋಡೋಕೇ ನಂಗೆ ನಾಚ್ಕೆ ಆಗ್ತಿದೆ! 'ಮಾತು ಆಡಿದ್ರೆ ಹೋಯ್ತು' ಅನ್ನೋದು ಇದಕ್ಕೇ ಇರ್ಬೇಕು!
- ಕೆಲವೊಮ್ಮೆ ಹಾಡಿನ ಸಾಹಿತ್ಯಕ್ಕಿಂತ ಹಿಂದಿನ ಆಲಾಪಾನೇ ಹಿಡಿಸಿಬಿಡುತ್ತೆ; ಇವತ್ಯಾಕೋ ನಿನ್ ಗೆಳತೀನೇ ಚೆನ್ನಾಗಿ ಕಾಣ್ತಿದ್ಳು!
- ಪಾಸ್ಪೋರ್ಟ್ ಇಲ್ಲಾಂತ ಗೊತ್ತಿದ್ರೂ ನಿದ್ರೆಲ್ಲಿ ಅಮೇರಿಕಾ ಕನಸು ಬೀಳೂದಿಲ್ವೇ?!
- ಊರಾಚೆ ಹೋಗೋಕೆ ಕಾರೇ ಬೇಕು, ಪೆಟ್ರೋಲ್ ಹಾಕ್ಸದು ಅಂದ್ರೆ ಆಗಲ್ಲ.. ಏನ್ಮಾಡಣ ಸಾಮಿ ನಾವು?!
- ಫುಲ್ ಪಾರ್ಟಿ ಮಾಡನ ಅಂದ್ಕೊಂಡು ಶಾಂತಿ ಸಾಗರಕ್ಕೆ ಹೋದಂಗಾಯ್ತು!
No comments:
Post a Comment